ಆನ್‌ಲೈನಲ್ಲಿ ಮದುವೆ, ಬಾತ್ ರೂಮಲ್ಲಿ ಶೋಭನ --ರೇಟಿಂಗ್ : 3/5 ***
Posted date: 06 Sat, Jan 2024 � 10:18:03 AM
ಈಗಿನ ಕಾಲದ ಜನ ಸಣ್ಣ ಪುಟ್ಟ ವಿಷಯಕ್ಕೂ ಸೋಷಿಯಲ್ ಮೀಡಿಯಾ ಅವಲಂಬಿಸಿರುತ್ತಾರೆ. ಅದು ಜನರ ಜೀವನದಲ್ಲಿ ಯಾವ ರೀತಿ  ಹಾಸುಹೊಕ್ಕಾಗಿದೆ ಎಂಬುದನ್ನು ಕಾಮಿಡಿ  ಕಥೆಯೊಂದಿಗೆ ನಿರ್ದೇಶಕ ಬಾವಾಜಿ  ಹೇಳುವ ಪ್ರಯತ್ನ ಮಾಡಿರುವ ಚಿತ್ರವೇ ಆನ್‌ಲೈನ್ ಮದುವೆ ಆಫ್ ಲೈನ್ ಶೋಭನ, ಆನ್‌ಲೈನ್‌ನಲ್ಲೆ ತಮ್ಮ ಮದುವೆಯನ್ನೂ ಮಾಡಿಕೊಂಡ ಗಂಡ ಹೆಂಡತಿಯ ನಡುವೆ  ಉಂಟಾದ ಭಿನ್ನಾಭಿಪ್ರಾಯ ಹೋಗಿ ಹೇಗೆ ಸಾಮರಸ್ಯ ಏರ್ಪಡುತ್ತದೆ ಎಂಬುದನ್ನು ಈ ಕಥೆಯಲ್ಲಿ ಹೇಳಲಾಗಿದೆ. 

ನಾಯಕ ಶಾಮ್‌ಸುಂದರ್( ಜಗಪ್ಪ ) ಮದುವೆ ವಯಸಿಗೆ ಬಂದ  ಹುಡುಗ. ತಾನೊಂದು ಮದುವೆಯಾಗಲು ವಧುವಿನ  ಹುಡುಕಾಟ ನಡೆಸಿರುತ್ತಾನೆ. ನಾಯಕಿ ಭಾಮಾ(ಸುಶ್ಮಿತ) ಸದಾ ಸೀರಿಯಲ್‌ಗಳಲ್ಲೇ ಮುಳುಗಿರುವ  ಈಗಿನ ಕಾಲದ ಹುಡುಗಿ, ಇನ್ನು  ಆಕೆಯ ತಮ್ಮನೋ (ಸೀರುಂಡೆ ರಘು) ಪ್ರಾಂಕ್ ವೀಡಿಯೋ ಮಾಡಿಕೊಂಡು ಲೈಫಲ್ಲಿ ಸೆಟಲ್  ಆಗಿರುರುತ್ತಾನೆ, ತಂದೆ ತಾಯಿ ಇಲ್ಲದ  ಅಕ್ಕನಿಗೆ ಬೇಗನೇ ಮದುವೆ ಮಾಡಿಸಿದರೆ ತನ್ನ ಜೀವನದ ದಾರಿ ಕ್ಲಿಯರ್ ಆಗುತ್ತದೆ ಎಂಬುದು  ಆಕೆಯ ತಮ್ಮನ  ಅಭಿಪ್ರಾಯ. ಅದೇ ಕಾರಣದಿಂದ  ನೂರಾರು ಹುಡುಗರನ್ನು ತಂದು ಆಕೆಯ ಮುಂದೆ ನಿಲ್ಲಿಸಿದರೂ, ಏನಾರೊಂದು ಮಿಸ್ಟೇಕ್ ಹುಡುಕುವ  ಭಾಮಾ ಅವರನ್ನು ರಿಜೆಕ್ಟ್ ಮಾಡುತ್ತಿರುತ್ತಾಳೆ,  ಈ ಮೂರು ಪಾತ್ರಗಳ ಸುತ್ತಲೂ ನಡೆಯುವ ಘಟನೆಗಳೇ ಪ್ರೇಕ್ಷಕರನ್ನು ಹಾಸ್ಯದ ಹೊನಲಲ್ಲಿ ತೇಲಿಸುತ್ತವೆ,  ಇದೇ ಸಂದರ್ಭದಲ್ಲಿ ಈ ರೀತಿಯ ವಧು ವರರಿಗಾಗಿಯೇ    ಆನ್‌ಲೈನ್ ಆಪ್‌ವೊಂದು  ಕ್ರಿಯೇಟ್ ಆಗಿರುತ್ತದೆ, ಇದರಲ್ಲಿ ನೋಂದಣಿ ಮಾಡಿಕೊಂಡರೆ  ಅವರೇ ನಮಗೆ ತಕ್ಕ ಹುಡುಗ, ಹುಡುಗಿಯನ್ನು  ಪರಿಚಯ ಮಾಡಿಸುತ್ತಾರೆ, ಅಭಿಪಾಯ ಹೊಂದಾಣಿಕೆಯಾದರೆ  ಆನ್‌ಲೈನ್‌ನಲ್ಲೇ ಮದುವೆಯನ್ನೂ ಸಹ ಮಾಡಿಸುತ್ತಾರೆ,  ಈ ಆಪ್ ಇರುವುದು ಗೊತ್ತಾದ ಕೂಡಲೇ ಶಾಮ ರಿಜಿಸ್ಟರ್  ಮಾಡಿಕೊಳ್ಳುತ್ತಾನೆ. 
 
ಭಾಮಾಳ‌ ಸಹೋದರ  ಕಾಮೇಶ, ತನ್ನಕ್ಕನ ಹೆಸರನ್ನು ರಿಜಿಸ್ಟ್ರೇಶನ್ ಮಾಡಿಸುತ್ತಾರೆ. ಇದೇ ಆಪ್ ಮೂಲಕ  ಶಾಮ್ ಭಾಮಾ ಇಬ್ಬರಿಗೂ ಪರಿಚಯ ಆಗುತ್ತದೆ, ನಂತರ ಇವರು ಆನ್‌ಲೈನ್‌ನಲ್ಲೇ ಮದುವೆಯಾಗುತ್ತಾರೆ.  ಆಮೇಲೆ ಭಾಮಾಳ ತಮ್ಮ ಕಾಮೇಶ್, ಶಾಮ್ ಮನೆಗೆ ಅಕ್ಕನನ್ನು  ಕರೆತರುತ್ತಾನೆ. ಶೋಭನದ ಸಿದ್ದತೆಯೂ ಆಗುತ್ತದೆ, ಆದರೆ  ಫಸ್ಟ್ ನೈಟ್ ಸಮಯದಲ್ಲೇ ಶಾಮ ಹಾಗೂ ಭಾಮ ಇಬ್ಬರಲ್ಲೂ ಭಿನ್ನಾಭಿಪ್ರಾಯ ಏರ್ಪಟ್ಟು  ಪ್ರಸ್ತ ನಡೆಯುವುದೇ ಇಲ್ಲ,  ಇಬ್ಬರೂ ನಾನೊಂದು ತೀರ, ನೀನೊಂದು ತೀರ ಎನ್ನುವಂತಾಗುತ್ತಾರೆ, ಕಾಮೇಶ ಕೂಡ ಇಬ್ಬರಲ್ಲೂ ಸಾಮರಸ್ಯ ಮೂಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾನೆ. ಆದರೆ ಚಿಕ್ಕ ಚಿಕ್ಕ  ವಿಷಯದಲ್ಲೂ ತಪ್ಪು ಹುಡುಕುವ ಭಾಮಾ ಫಸ್ಟ್ ನೈಟ್ ಮುಂದೆ ಹಾಕುತ್ತಲೇ ಇರ‍್ತಾಳೆ.
 
ಕೊನೆಗೂ ಆ ಗಂಡ ಹೆಂಡತಿ ಒಂದಾಗುವ ಸಮಯ ಬಂತೇ ಅವರು ಎಲ್ಲಿ ಶೋಭನ ಮಾಡಿಕೊಂಡರು, ಕಾಮೇಶನಿಗೆ ಮದುವೆಯಾಯಿತೇ ಎಂಬುದನ್ನು ಬೆಳ್ಳಿತೆರೆಯ ಮೇಲೆ ನೋಡಿದರೇ ಚೆನ್ನ. ಚಿತ್ರದಲ್ಲಿ ೨ ಹಾಡುಗಳು ಸುಂದರವಾಗಿ ಮೂಡಿಬಂದಿವೆ, ನಿರ್ದೇಶಕರು ಪ್ರತಿ ಪಾತ್ರವನ್ನೂ ತುಂಬಾ ಚೆನ್ನಾಗಿ ಪೋಷಿಸಿದ್ದಾರೆ, ಅಭಿನಯದ ವಿಷಯಕ್ಕೆ ಬಂದರೆ ಜಗಪ್ಪ ಸುಶ್ಮಿತಾ  ಒಬ್ಬರನ್ನೊಬ್ಬರು ಮೀರಿಸುವಂಥ  ಅಭಿನಯ ನೀಡಿದ್ದಾರೆ, ಪ್ರೇಕ್ಷಕರನ್ನು ನಗಿಸುವುದು ಅಷ್ಟು ಸುಲಭವಲ್ಲ, ಆದರೆ ಇವರಿಬ್ಬರೂ ಮೊದಲಿಂದಲೂ ನಗಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವುದರಿಂದ ನೀರು ಕುಡಿದಷ್ಟು ಸುಲಭವಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ, ಅಲ್ಲದೆ  ಸೀರುಂಡೆ ರಘು ಕೂಡ ತಮ್ಮ ಪಾತ್ರಕ್ಕೆ ನಗುವಿನ ಟಾನಿಕ್ ಮೂಲಕ ಶಕ್ತಿ ತುಂಬಿದ್ದಾರೆ.
 
ಉಳಿದಂತೆ ನಾಯಕ ಮಾವ, ನಾಯಕಿಯ ಸ್ನೇಹಿತೆ, ಕಾಮೇಶನ ಪತ್ನಿಯ ಪಾತ್ರಗಳು ಕಥೆಗೆ ಪೂರಕವಾಗಿ ಬಂದುಹೋಗುತ್ತವೆ. ಬಾಲು ಅವರ ಕ್ಯಾಮೆರಾ ವರ್ಕ ಚೆನ್ನಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed